
25th April 2025
ಬೀದರ. ಏ. 24 :- ನಗರದ ನೌಬಾದ್ ಸಮೀಪದ ಕೆ.ಇ.ಬಿ. ಹಾಗೂ ಸಹ್ಯಾದ್ರಿ ಬಡಾವಣೆಗಳಿಗೆ ರಸ್ತೆ ನಿರ್ಮಿಸಬೇಕು ಎಂದು ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.
ಭಾಲ್ಕಿಯಲ್ಲಿ ಗುರುವಾರ ಸಂಸದ ಸಾಗರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಎರಡೂ ಬಡಾವಣೆಗಳಲ್ಲಿ 200 ರಿಂದ 250 ಮನೆಗಳು ಇವೆ. ಆದರೆ, ಬಡಾವಣೆಗಳಿಗೆ ರಸ್ತೆ ಇಲ್ಲ. ಹೀಗಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಹೇಳತೀರದ್ದಾಗಿದೆ ಎಂದು ಗಮನ ಸೆಳೆದರು.
ರಸ್ತೆ ನಿರ್ಮಿಸಬೇಕು. ಕೆ.ಇ.ಬಿ. ಬಡಾವಣೆಯ ಜಗಜ್ಯೋತಿ ಬಸವೇಶ್ವರ ಉದ್ಯಾನಕ್ಕೆ ಸೌಕರ್ಯ ಕಲ್ಪಿಸಬೇಕು ಎಂದು ಕೋರಿದರು.
ಬಡಾವಣೆಯ ರಮೇಶ ಚಿದ್ರಿ, ವೀರಶೆಟ್ಟಿ ಚನಶೆಟ್ಟಿ, ವೈಜಿನಾಥ ಬಾವಗೆ, ಶಿವರಾಜ ರಟಕಲೆ, ಮಲ್ಲಿಕಾರ್ಜುನ ಗಂಗು, ವಿಷ್ಣುಕಾಂತ ಬಾಜೋಳಗೆ ಇದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ